ಹುಬ್ಬಳ್ಳಿ: ರೈಲ್ವೆ ನಿಲ್ದಾಣದಿಂದ ಗೋಕುಲ ರೋಡ್ನ ಫಾರ್ಚೂನ್ ಹೋಟೆಲ್ಗೆ ತೆರಳುತ್ತಿದ್ದ ವೇಳೆ ಸುಮಾರು ₹3 ಲಕ್ಷ ಮೌಲ್ಯದ ಐಪ್ಯಾಡ್ ಕಳೆದುಕೊಂಡು ಕಂಗಾಲಾಗಿದ್ದ ಚೆನ್ನೈ ಮೂಲದ ವಕೀಲ ಅರವಿಂದ್ ಘೋಷ್ ಅವರಿಗೆ ಗೋಕುಲ ಪೊಲೀಸರು ನೆರವಾಗಿದ್ದಾರೆ.
ಐಪ್ಯಾಡ್ ಕಳೆದುಹೋದ ಬಗ್ಗೆ ಅರವಿಂದ್ ಘೋಷ್ ಅವರು ಗೋಕುಲ ರೋಡ್ ಪೊಲೀಸ್ ಠಾಣೆಗೆ ತೆರಳಿ ಇನ್ಸ್ಪೆಕ್ಟರ್ ಸಂಗಮೇಶ್ ದಿಡಿಗನಾಳ ಅವರಿಗೆ ಮಾಹಿತಿ ನೀಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಇನ್ಸ್ಪೆಕ್ಟರ್ ಅವರು ಸಿಬ್ಬಂದಿಗೆ ಸೂಕ್ತ ಮಾರ್ಗದರ್ಶನ ನೀಡಿ ಐಪ್ಯಾಡ್ ಪತ್ತೆ ಕಾರ್ಯಾಚರಣೆಗೆ ಸೂಚಿಸಿದರು.
ಇನ್ಸ್ಪೆಕ್ಟರ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಗೋಕುಲ ಠಾಣೆ ಪೊಲೀಸರು, ಕೆಲವೇ ಗಂಟೆಗಳಲ್ಲಿ ಕಳೆದುಹೋಗಿದ್ದ ದುಬಾರಿ ಐಪ್ಯಾಡ್ ಅನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದರು.
ನಂತರ ಪತ್ತೆಯಾದ ಐಪ್ಯಾಡ್ ಅನ್ನು ಅದರ ವಾರಸುದಾರರಾದ ಅರವಿಂದ್ ಘೋಷ್ ಅವರಿಗೆ ಸುರಕ್ಷಿತವಾಗಿ ಹಸ್ತಾಂತರಿಸಲಾಯಿತು. ಪೊಲೀಸರು ತ್ವರಿತವಾಗಿ ಸ್ಪಂದಿಸಿ ಕಳೆದುಹೋದ ವಸ್ತುವನ್ನು ಪತ್ತೆಹಚ್ಚಿ ಮರಳಿಸಿರುವ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.