ಹುಬ್ಬಳ್ಳಿ: ಅಕ್ಷಯ ಪಾರ್ಕ್ ಬಳಿಯ ವೆಸ್ಟ್ಸೈಡ್ ಮಾಲ್ ಸಮೀಪ ಕಳೆದುಹೋಗಿದ್ದ ಮಹಿಳೆಯ ಮಾಂಗಲ್ಯ ಸರವನ್ನು ಗೋಕುಲ್ ರೋಡ್ ಠಾಣೆಯ ಪೊಲೀಸರು ಕೇವಲ 24 ಗಂಟೆಯೊಳಗೆ ಪತ್ತೆಹಚ್ಚಿ ವಾರಸುದಾರರಿಗೆ ಮರಳಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ದೇಶಪಾಂಡೆ ನಗರದ ನಿವಾಸಿ ವಿನಯ್ ದುಂಗಡಿ ಅವರು ತಮ್ಮ ಪತ್ನಿಯ ಮಾಂಗಲ್ಯ ಸರ ಕಳೆದುಕೊಂಡ ಬಗ್ಗೆ ದೂರು ದಾಖಲಿಸಿದ್ದು, ದೂರಿನ ಮೇರೆಗೆ ಗೋಕುಲ್ ರೋಡ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಸಂಗಮೇಶ್ ದಿಡಿಗಿನಾಳ ಅವರ ನೇತೃತ್ವದ ತಂಡ ತಕ್ಷಣ ಕಾರ್ಯಪ್ರವೃತ್ತವಾಗಿ, ವಿವಿಧ ಆಯಾಮಗಳಲ್ಲಿ ಪರಿಶೀಲನೆ ನಡೆಸಿ ಕೇವಲ 24 ಗಂಟೆಯೊಳಗೆ ಕಳೆದುಹೋಗಿದ್ದ ಮಾಂಗಲ್ಯ ಸರವನ್ನು ಪತ್ತೆಹಚ್ಚಿದೆ.

ನಂತರ ಪತ್ತೆಯಾದ ಮಾಂಗಲ್ಯ ಸರವನ್ನು ಪಿರ್ಯಾದಿದಾರರಿಗೆ ಮರಳಿಸುವ ಮೂಲಕ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಕ್ರೈಮ್ ಸಿಬ್ಬಂದಿಗಳಾದ ಬಸವರಾಜ್ ಬೆಳಗಾವಿ, ವಸಂತ ಗುಡಗೇರಿ, ಸುನಿಲ್ ಲಮಾಣಿ, ರುದ್ರಪ್ಪ ಹೊರಟ್ಟಿ, ಚಂದ್ರು ಹಿರೇಮಠ, ಧರೇಶ್ ಬೆಂಡಿಗೇರಿ ಹಾಗೂ ಮಾಲರೆಡ್ಡಿ ಬೆನ್ನೂರ್ ಅವರು ಭಾಗವಹಿಸಿದ್ದರು.
ಕಳೆದುಹೋದ ಅಮೂಲ್ಯ ವಸ್ತುವನ್ನು ತ್ವರಿತವಾಗಿ ಪತ್ತೆಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಿದ ಗೋಕುಲ್ ರೋಡ್ ಪೊಲೀಸ್ ಠಾಣೆಯ ಸಿಬ್ಬಂದಿಯ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.