ಹುಬ್ಬಳ್ಳಿ: ರೈತರ ಜಮೀನುಗಳಲ್ಲಿನ ಬೋರ್ವೆಲ್ ಮೋಟರ್ ಕೇಬಲ್ಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರು ಶಂಕಿತರನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಗಾಮನಗಟ್ಟಿ ಗ್ರಾಮದಲ್ಲಿ ನಡೆದಿದೆ.
ಗಾಮನಗಟ್ಟಿ ಗ್ರಾಮದ ಇಂಡಸ್ಟ್ರಿಯಲ್ ಪ್ರದೇಶಕ್ಕೆ ಹೋಗುವ ರಸ್ತೆಯ ಓಣಿ ಹಳ್ಳದ ಬಳಿ ಈ ಘಟನೆ ನಡೆದಿದೆ. ಬೋರ್ವೆಲ್ ಮೋಟರ್ನ ಕೇಬಲ್ ಸಮೇತ ಇಬ್ಬರು ಶಂಕಿತರು ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾರೆ ಎಂದು ತಿಳಿದುಬಂದಿದೆ.

ಒಟ್ಟು ಮೂವರು ಈ ಕೃತ್ಯದಲ್ಲಿ ಭಾಗಿಯಾಗಿದ್ದರು ಎನ್ನಲಾಗಿದ್ದು, ಗ್ರಾಮಸ್ಥರು ಅವರನ್ನು ಹಿಡಿಯಲು ಮುಂದಾದಾಗ ಓರ್ವ ಸ್ಥಳದಿಂದ ಪರಾರಿಯಾಗಿದ್ದಾನೆ. ಉಳಿದ ಇಬ್ಬರನ್ನು ಕಳ್ಳತನಕ್ಕೆ ಬಳಸುತ್ತಿದ್ದ ಎನ್ನಲಾದ KA-17-EP-7549 ನೋಂದಣಿ ಸಂಖ್ಯೆಯ ಡಿಸ್ಕವರ್ ಬೈಕ್ ಸಮೇತ ವಶಕ್ಕೆ ಪಡೆದು ನವನಗರ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ.
ರೈತರ ಜಮೀನುಗಳಲ್ಲಿರುವ ಬೋರ್ವೆಲ್ ಮೋಟರ್ಗಳು ಹಾಗೂ ವಿದ್ಯುತ್ ಕೇಬಲ್ಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಗ್ರಾಮಗಳ ರೈತರು ಮತ್ತು ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.