ಹುಬ್ಬಳ್ಳಿ: ನಗರದ ಕೇಶ್ವಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಕುಲ ರೋಡ್ ಹಾಗೂ ಸಿಸಿಬಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯಿಂದ ಸುಮಾರು 8 ಲಕ್ಷ ಕಿಮ್ಮತ್ತಿನ 33 ಗ್ರಾಂ ಚಿನ್ನಾಭರಣ ಹಾಗೂ 2 ಕೆ.ಜಿ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ಹುಬ್ಬಳ್ಳಿಯ ರಾಮನಗರದ ನಿವಾಸಿ ಅಜಯ್ ಬಂಡಿವಾಡ (20) ಎಂದು ಗುರುತಿಸಲಾಗಿದೆ.
ಗೋಕುಲ ರೋಡ್ ಪೊಲೀಸ್ ಠಾಣೆ ವ್ಯಾಪ್ತಿಯ ಅಕ್ಷಯ ಪಾರ್ಕ್ ಬಳಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರು ಕೇಶ್ವಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ 33 ಗ್ರಾಂ ಚಿನ್ನಾಭರಣ ಹಾಗೂ 2 ಕೆ.ಜಿ ಬೆಳ್ಳಿ ವಸ್ತುಗಳನ್ನು ಆರೋಪಿ ಸಮೇತ ವಶಪಡಿಸಿಕೊಂಡಿದ್ದಾರೆ.

ಈ ಕಾರ್ಯಾಚರಣೆ ಪೊಲೀಸ್ ಆಯುಕ್ತ ಭೂಷಣ್ ಗುಲಾಬರಾವ್ ಬೋರಸೆ, ಡಿಸಿಪಿ ಶೃತಿ ಎನ್.ಎಸ್, ಸಿಸಿಆರ್ ಬಿ ಎಸಿಪಿ ವಿಜಯಕುಮಾರ ತಳವಾರ, ಉತ್ತರ ವಲಯದ ಎಸಿಪಿ ಶಿವಾನಂದ ಚಲವಾದಿ ಹಾಗೂ ಸಿಸಿಬಿ ಎಸಿಪಿ ಶಿವಪ್ರಕಾಶ ನಾಯ್ಡು ಅವರ ಮಾರ್ಗದರ್ಶನದಲ್ಲಿ
ಗೋಕುಲ ರೋಡ್ ಇನ್ಸ್ಪೆಕ್ಟರ್ ಸಂಗಮೇಶ ದಿಡಿಗಿನಾಳ ಹಾಗೂ ಪಿಎಸ್ಐ ಸಚಿನ್ಕುಮಾರ ದಾಸರಡ್ಡಿ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳಾದ ವಸಂತ ಗುಡಗೇರಿ, ಬಿ.ಎಚ್. ಬೆಳಗಾವಿ, ಎ.ಎಸ್. ತಗಡಿನಮನಿ, ಎಸ್.ಕೆ. ಲಮಾಣಿ, ಸಿ.ಎಸ್. ಹಿರೇಮಠ, ವಿ.ಕೆ. ಸುನಗದ, ಎಂ.ಎಸ್. ಬೆನ್ನೂರ, ಆರ್.ಎಂ. ಹೊರಟ್ಟಿ, ಡಿ.ಜೆ. ಬೇಂದ್ರಿಗೇರಿ ಹಾಗೂ ಸಿಸಿಬಿ ವಿಭಾಗದ ಜನಾರ್ದನ ಎಂ.ಬಿ. ಭಜಂತ್ರಿ, ಎಂ.ಬಿ. ಧನಿಗೊಂಡ ಮತ್ತು ಜ್ಞಾನೇಶ್ವರ ಮಾಂಗ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಮನೆ ಕಳ್ಳತನ ಪ್ರಕರಣವನ್ನು ಭೇದಿಸಿ ಕಳುವಾಗಿದ್ದ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.