ಹುಬ್ಬಳ್ಳಿ: ನಗರದ ಖ್ಯಾತ ಲೇಟ್ ನೈಟ್ ಹೋಟೆಲ್ಗಳಲ್ಲಿ ಒಂದೆಂದು ಹೆಸರಾಗಿರುವ ಶ್ರೀನಿಧಿ ಹೋಟೆಲ್ನಲ್ಲಿ ತಡರಾತ್ರಿ ಭಾರೀ ಗಲಾಟೆ ನಡೆದಿದ್ದು, ಕುಡಿತದ ಅಮಲಿನಲ್ಲಿದ್ದ ಯುವಕ–ಯುವತಿಯ ಜಗಳ ಹೈಡ್ರಾಮಾ ಸ್ವರೂಪ ಪಡೆದುಕೊಂಡಿದೆ.
ಪ್ರೇಮಿಗಳಿಬ್ಬರ ನಡುವೆ ಆರಂಭವಾದ ಜಗಳ ಬಿಡಿಸಲು ಮುಂದಾದ ಸಾರ್ವಜನಿಕರ ಮೇಲೆಯೇ ಅಮಲಿನಲ್ಲಿದ್ದ ಯುವತಿ ಹಲ್ಲೆಗೆ ಮುಂದಾಗಿದ್ದಾಳೆ ಎನ್ನಲಾಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಬಂದ ಮಹಿಳಾ ಪೊಲೀಸ್ ಸಿಬ್ಬಂದಿಯ ಮೇಲೆ ಕೂಡ ಹಲ್ಲೆ ಮಾಡಿದ್ದು ಸದ್ಯ ಗಾಯಗೊಂಡ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿದ್ಯಾನಗರ ಠಾಣೆ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಕುಡಿತದ ಅಮಲಿನಲ್ಲಿದ್ದ ಯುವಕ ಹಾಗೂ ಯುವತಿಯನ್ನು ಹೆಚ್ಚಿನ ವೈದ್ಯಕೀಯ ಪರೀಕ್ಷೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಆಸ್ಪತ್ರೆಯಲ್ಲಿ ಕೂಡ ಚಿಕಿತ್ಸೆ ಮಾಡಲು ಮುಂದಾದ ಕಿಮ್ಸ್ ಸಿಬ್ಬಂದಿಯ ಮೇಲೆ ಕೂಡ ಅಮಲಿನಲ್ಲಿದ್ದ ಯುವತಿ ಹಲ್ಲೆ ಮಾಡಿದ್ದಾಳೆಂದು ತಿಳಿದುಬಂದಿದೆ.
https://www.instagram.com/reel/Dd7SIFzSeUL/?stkn=MWt4Y2VrdzA4aTdubA==
ಆದರೆ, ಇಷ್ಟೆಲ್ಲಾ ಗಲಾಟೆಗೆ ಕಾರಣವೇನು? ಯುವಕ–ಯುವತಿ ಯಾರು? ಇಬ್ಬರ ನಡುವೆ ನಿಜವಾಗಿಯೂ ನಡೆದಿದ್ದೇನು? ಎಂಬ ಪ್ರಶ್ನೆಗಳು ಇದೀಗ ಮೂಡಿವೆ.
ಶ್ರೀನಿಧಿ ಹೋಟೆಲ್ನಲ್ಲಿ ನಡೆದ ಈ ತಡರಾತ್ರಿ ರಂಪಾಟದ ಸಂಪೂರ್ಣ ಸತ್ಯ ವಿದ್ಯಾನಗರ ಪೊಲೀಸರ ತನಿಖೆಯಿಂದಷ್ಟೇ ಹೊರಬರಬೇಕಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.