ಹುಬ್ಬಳ್ಳಿ: ಪೊಲೀಸ್ ಆಯುಕ್ತರ ನೇಮಕದ ಕುರಿತು ಕಳೆದ ಕೆಲ ದಿನಗಳಿಂದ ಮೂಡಿದ್ದ ಗೊಂದಲ ಹಾಗೂ ಕುತೂಹಲಕ್ಕೆ ಇದೀಗ ತೆರೆ ಬಿದ್ದಿದೆ.
ಬೋರಸೆ ಭೂಷಣ್ ಗುಲಾಬ್ ರಾವ್ ಅವರು ಹುಬ್ಬಳ್ಳಿ-ಧಾರವಾಡ ಅವಳಿ ನಗರದ ನೂತನ ಪೊಲೀಸ್ ಆಯುಕ್ತರಾಗಿ ನೇಮಕ ಮಾಡಿ ಸರಕಾರ ಖಡಕ್ ಆದೇಶ ಹೊರಡಿಸಿತ್ತು. ಆದರೆ ಮಾಡಿದ ಆದೇಶಕ್ಕೆ ತಡೆ ನೀಡಿದ ಹಿನ್ನಲೆ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಮತ್ತೆ ಅದೇ ಆದೇಶವನ್ನು ಮುಂದುವರಿಸಲು ರಾಜ್ಯ ಸರಕಾರ ಖಡಕ್ ಸೂಚನೆ ನೀಡಿದೆ. ಸೂಚನೆಯ ಪ್ರಕಾರ ಅವಳಿನಗರದ ಪೊಲೀಸ್ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿರುವ ಎನ್. ಶಶಿಕುಮಾರ್ ಅವರಿಂದ ಇಂದು ಅಧಿಕಾರ ಸ್ವೀಕರಿಸಲಿರುವ ಭೂಷಣ್ ಗುಲಾಬ್ ರಾವ್, ಇನ್ಮುಂದೆ ಹುಬ್ಬಳ್ಳಿ-ಧಾರವಾಡ ನಗರದ ಕಾನೂನು ಸುವ್ಯವಸ್ಥೆಯ ಹೊಣೆಗಾರಿಕೆ ವಹಿಸಿಕೊಳ್ಳಲಿದ್ದಾರೆ.
ಯಾರು ನೂತನ ಪೊಲೀಸ್ ಆಯುಕ್ತರು? ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದ್ದು, ಭೂಷಣ್ ಗುಲಾಬ್ ರಾವ್ ಅವರ ಹೆಸರಿನೊಂದಿಗೆ ಆಯುಕ್ತರ ನೇಮಕದ ಗೊಂದಲಕ್ಕೆ ಬ್ರೇಕ್ ಬಿದಂತಾಗಿದೆ.