ಹುಬ್ಬಳ್ಳಿಯ ಜನರೇ ಎಚ್ಚರ… ಎಚ್ಚರ..!ನಗರದಲ್ಲಿ ಮುಗ್ಧ ಜನರನ್ನೇ ಟಾರ್ಗೆಟ್ ಮಾಡಿಕೊಂಡು ಕೋಟ್ಯಂತರ ರೂಪಾಯಿ ಮೋಸ ಮಾಡುತ್ತಿರುವ ಭೂ ಖದೀಮನೊಬ್ಬನ ಕಥೆ ಇದೀಗ ಜನರಲ್ಲಿ ಆತಂಕ ಹುಟ್ಟಿಸಿದೆ. ಖಾಲಿ ಜಾಗ ಕಂಡರೆ ಸಾಕು… ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡುವ ಈ ಖತರ್ನಾಕ್ ಗ್ಯಾಂಗ್ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ.
ಹೌದು… ಹುಬ್ಬಳ್ಳಿ ಹಾಗೂ ಅವಳಿ ನಗರದ ಸುತ್ತಮುತ್ತ ಇರುವ ಖಾಲಿ ಜಾಗ, ಹೊಲಗಳು ಮತ್ತು ವಾರಸುದಾರರಿಲ್ಲದ ಆಸ್ತಿಗಳ ಮೇಲೆ ಈ ಭೂ ಖದೀಮನ ಕಣ್ಣು ಬಿದ್ದರೆ ಸಾಕು… ಕೆಲವೇ ದಿನಗಳಲ್ಲಿ ನಕಲಿ ದಾಖಲೆ ಸಿದ್ಧವಾಗುತ್ತದೆ ಎನ್ನಲಾಗಿದೆ.ಒಬ್ಬನೇ ಅಲ್ಲ… ಈತನ ಹಿಂದೆ ದೊಡ್ಡ ಟೀಮೇ ಕಾರ್ಯನಿರ್ವಹಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ನಕಲಿ ದಾಖಲೆ ಸೃಷ್ಟಿಸುವುದು, ಕಡಿಮೆ ಬೆಲೆಗೆ ಜಾಗ ಮಾರಾಟ ಮಾಡುವುದು, ಅಮಾಯಕರನ್ನು ಬಲೆಗೆ ಬೀಳಿಸುವುದೇ ಇವರ ವೃತ್ತಿಯಂತೆ.ಇನ್ನೂ ಶಾಕಿಂಗ್ ಅಂದ್ರೆ… ನಕಲಿ ಜಾಗಗಳ ಮಾಹಿತಿ ಕೊಡುವ ಕೆಲವರು ಸಬ್ ರಿಜಿಸ್ಟರ್ ಕಚೇರಿ ಸಿಬ್ಬಂದಿಗಳಂತೆ. ಇದರಿಂದ ಅನೇಕ ಕುಟುಂಬಗಳು ಜೀವನಪೂರ್ತಿ ಮಾಡಿದ ದುಡ್ಡನ್ನೇ ಕಳೆದುಕೊಂಡು ಬೀದಿಗೆ ಬಂದಿವೆ ಎಂಬ ಮಾತುಗಳು ಹಾಗೂ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿರುವುದು ಕೂಡ ಕೇಳಿಬಂದಿದೆ.

ಸೆಟಲ್ಮೆಂಟ್ ನಿವಾಸಿಯಾಗಿರುವ ಈತನ ಲೈಫ್ಸ್ಟೈಲ್ ನೋಡಿ ಹಲವರು ಮೋಸ ಹೋಗಿದ್ದಾರೆ ಎನ್ನಲಾಗುತ್ತಿದೆ. ತಲೆ ಮೇಲೆ ಅರ್ಧ ಟೋಪಿ ಹಾಕಿಕೊಂಡು ಜನರಿಗೆ ಮಕ್ಮಲ್ ಟೋಪಿ ಹಾಕುವ ಈ ಖದೀಮನ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ ಹೆಚ್ಚಾಗಿದೆ.ಇಷ್ಟೆಲ್ಲಾ ಆರೋಪಗಳಿದ್ದರೂ ಈತನ ವಿರುದ್ಧ ಗಂಭೀರ ಕ್ರಮವಾಗದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕೆಲವರು ಪೊಲೀಸರ ಕೈಮಿಲಾಯಿಸುವಿಕೆಯ ಗುಸುಗುಸು ಮಾತನ್ನೂ ಆಡುತ್ತಿದ್ದಾರೆ.

ರಾಘವೇಂದ್ರ ಗೋಕಾಕ್

ಶಶಿಕಾಂತ್ ಚಿನ್ನದಕೈ
*ಈ ಭೂ ಖದೀಮನ ನಿಜವಾದ ಮುಖವೇನು..?*
*ಇವನ ಜೊತೆ ಯಾರೆಲ್ಲ ಸೇರಿದ್ದಾರೆ..?*
*ಮೋಸದ ಜಾಲ ಎಷ್ಟು ದೊಡ್ಡದು..?*
ಈತನ ಕುರಿತ ಇನ್ನಷ್ಟು ಸ್ಫೋಟಕ ಮಾಹಿತಿಯನ್ನು ನಮ್ಮ ಮುಂದಿನ ಸುದ್ದಿಯಲ್ಲಿ ಬಹಿರಂಗಪಡಿಸುತ್ತೇವೆ.ಇನ್ನಷ್ಟು ಅಪ್ಡೇಟ್ಗಾಗಿ ನಮ್ಮೊಂದಿಗೆ ಇರಿ.